ಹೌದು ಸರ್ಕಾರ ರಚನೆಯಾದ ಮೊದಲ ಸಂಪುಟದಲ್ಲೇ ತನ್ನ 5 ಗ್ಯಾರಂಟಿಗಳನ್ನು ನೀಡುತ್ತೇವೆ ಎಂದು ಹೇಳಿದ ಕಾಂಗ್ರೆಸ್ ಸರ್ಕಾರ ಅದರಂತೆಯೇ ಗ್ರಹಜ್ಯೋತಿ ಯೋಜನೆಗೆ ತಗಲುವ ವೆಚ್ಚದ ಬಗ್ಗೆ ಮಾಹಿತಿ ನೀಡಲು ಅದರ ಇಲಾಖೆಗೆ ವರದಿ ಕೇಳಿತ್ತು ...
ಅದರಂತಯೇ ವರದಿ ನೀಡಿರುವ ಇಲಾಖೆಯು ತಿಂಗಳಿಗೆ 1995 ಕೋಟಿಯಂತೆ ವರ್ಷಕ್ಕೆ 23,400 ಕೋಟಿ ಹಣದ ಅಗತ್ಯವಿದೆ ಎಂದು ತಿಳಿಸಿದೆ....
ರಾಜ್ಯದಲ್ಲಿ ಬೆಸ್ಕಾಂ ವ್ಯಾಪ್ತಿಯಲ್ಲಿ 86 ಲಕ್ಷ , ಚೆಸ್ಕಾಂ ವ್ಯಾಪ್ತಿಯಡಿ 20 ಲಕ್ಷ , ಮೆಸ್ಕಾಂ ವ್ಯಾಪ್ತಿಯಡಿ 15 ಲಕ್ಷ , ಹೆಸ್ಕಾಂ ವ್ಯಾಪ್ತಿಯಡಿ 28 ಲಕ್ಷ , ಕೊನೆಯದಾಗಿ ಜೆಸ್ಕಾ ವ್ಯಾಪ್ತಿಯಲ್ಲಿ 19 ಲಕ್ಷ ಸಂಪರ್ಕಗಳು ಸೇರಿ ಎಲ್ಲಾ ನಿಗಮಗಳಿಂದ 1.70 ಕೋಟಿ ವಿದ್ಯುತ್ ಸಂಪರ್ಕಗಳಿದ್ದು ಅದರಲ್ಲಿ ಬರೋಬ್ಬರಿ 1.20 ಕೋಟಿ ಸಂಪರ್ಕಗಳ ಜನ ಪ್ರಸ್ತುತ ತಿಂಗಳಿಗೆ 200 ಯುನಿಟ್ ಗಳಿಗಿಂತ ಕಡಿಮೆ ವಿದ್ಯುತ್ ಉಪಯೋಗಿಸುತ್ತಿರುವುದರಿಂದ ಅಷ್ಟೂ ಸಂಪರ್ಕಗಳಿಗೆ ಉಚಿತ ವಿದ್ಯುತ್ ನೀಡುವ ದೊಡ್ಡ ಸವಾಲು ರಾಜ್ಯ ಸರ್ಕಾರದ ಮುಂದಿದೆ ..
ಕಾಂಗ್ರೆಸ್ ಹೇಳಿದ್ದ ತನ್ನ 5 ಗ್ಯಾರಂಟಿಗಳಿಂದ ₹50,000 ಕೋಟಿ ಖರ್ಚಾಗಬಹುದೆಂದು ಅಂದಾಜಿಸಿತ್ತು , ಆದರೆ ಈ ವರದಿ ಸರ್ಕಾರದ ಅಂದಾಜಿನ ಅರ್ಧ ಭಾಗದಷ್ಟು ಹಣ ಇದೊಂದೆ ಯೋಜನೆಗೆ ತಗುಲುತ್ತಿರುವುದು ಸರ್ಕಾರಕ್ಕೆ ಹೊಸ ತಲೆನೋವು ತಂದಿದೆ..
ಹೆಚ್ಚಿನ ನ್ಯೂಸ್ ಗಳಿಗಾಗಿ WhatsApp Group jion ಆಗಿ
https://chat.whatsapp.com/L3sFUjEjg8bBca9R8SP48E