ಅಹ್ಮದಾಬಾದ್: ಐಪಿಎಲ್ 2023ರ ಫೈನಲ್ ಪಂದ್ಯದಲ್ಲಿ ಬೃಹತ್ ಮೊತ್ತದ ಹೊರತಾಗಿಯೂ ಗುಜರಾತ್ ಟೈಟನ್ಸ್ ತಂಡ ಮುಗ್ಗರಿಸಿದ್ದು, ಮತ್ತೆ ಐಪಿಎಲ್ ಟ್ರೋಫಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಮುಡಿಗೇರಿಸಿಕೊಂಡಿದೆ.
ಮೊದಲು ಬ್ಯಾಟಿಂಗ್ ಮಾಡಿದ್ದ ಗುಜರಾತ್ ತಂಡ ನಿಗಧಿತ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 214 ರನ್ ಕಲೆಹಾಕಿತು. ಬಳಿಕ ಮಳೆ ಬಂದು ಆಟ ಸ್ಥಗಿತವಾಗಿತ್ತು. ಬಳಿಕ ಆಟ ಪ್ರಾರಂಭವಾದಾಗ DLS ಆಧಾರದಲ್ಲಿ ಗುರಿಯನ್ನು 15 ಓವರ್ ನಲ್ಲಿ 171 ರನ್ ಗಳೆಂಸು ನಿಗದಿ ಪಡಿಸಿಸಲಾಯಿತು. ಈ ಮೊತ್ತವನ್ನು ಬೆನ್ನು ಹತ್ತಿದ ಚೆನ್ನೈ ತಂಡ ನಿಗದಿತ 15 ಓವರ್ ನಲ್ಲಿ 172 ರನ್ ಗಳಿಸಿ 5 ವಿಕೆಟ್ ಗಳ ಅಂತರ ವಿರೋಚಿತ ಜಯ ದಾಖಲಿಸಿತು.
ಈ ಮೂಲಕ ಚೆನ್ನೈ ತಂಡ ಫೈನಲ್ ನಲ್ಲಿ 5 ವಿಕೆಟ್ ಗಳ ಗೆಲುವು ಕಂಡರೆ, ಗುಜರಾತ್ 214 ರನ್ ಗಳ ಬ್ರಹತ್ ಮೊತ್ತ ಗಳಿಸಿದರೂ ಸೋಲು ಕಾಣಬೇಕಾಯಿತು , ಮಳೆಯ ಕಾರಣ ಚೆನೈ ಗೆ ವರದಾನವಾಯಿತು , ಗುಜರಾತ್ ಪರ ನೂರ್ ಅಹ್ಮದ್ 2 ವಿಕೆಟ್ ಪಡೆದರೆ ಮೋಹಿತ್ ಶರ್ಮಾ 3 ವಿಕೆಟ್ ಪಡೆದರು.
No comments:
Post a Comment