Tuesday, May 30, 2023

ಮಾರ್ಕೆಟ್ ನಲ್ಲಿರುವ ಉತ್ತಮ ಲ್ಯಾಪ್‌ಟಾಪ್ ಯಾವುದು :- ಲ್ಯಾಪ್‌ಟಾಪ್ ಆಯ್ಕೆ ಮಾಡುವುದು ಹೇಗೆ

ಪ್ರಸ್ತುತ ಜಗತ್ತಿನಲ್ಲಿ ಲ್ಯಾಪ್‌ಟಾಪ್ ಎಂಬುದು ವಿಧ್ಯಾರ್ಥಿಗಳಿಂದ ಹಿಡಿದು ಹಲವಾರು ಬಹುಪಯೋಗಿ ಕೆಲಸದಲ್ಲಿರೋ ಜನರಿಗೆ ಅತ್ಯವಶ್ಯಕವಾಗಿದೆ , ಆದರೆ  ಎಂತಹ ಲ್ಯಾಪ್‌ಟಾಪ್ ಕೊಂಡುಕೊಳ್ಳಬೇಕೆಂಬ ಗೊಂದಲವಿರುತ್ತದೆ  , ಅವರಿಗಾಗಿ ಇಲ್ಲಿ ಕೆಲವು ಟಿಪ್ಸ್ ಗಳನ್ನು ನೀಡಲಾಗಿದೆ ..
ಇಂದು ಲ್ಯಾಪ್‌ಟಾಪ್‌ ಮಾರುಕಟ್ಟೆಯಲ್ಲಿ ಬಗೆ ಬಗೆ ಕಂಪನಿಗಳ ವಿಭಿನ್ನ ಫೀಚರ್‌ಗಳ ಲ್ಯಾಪ್‌ಟಾಪ್‌ಗಳು ಲಭ್ಯ. ಆದರೆ ಯಾರು ಎಂತಹ ಲ್ಯಾಪ್‌ಟಾಪ್‌ ಖರೀದಿಸಿದರೆ ಉತ್ತಮ ಎಂಬುದನ್ನು ಬಹುಸಂಖ್ಯಾತರು ತಿಳಿದಿರುವುದಿಲ್ಲ. ಉದಾಹರಣೆಗೆ ವಿದ್ಯಾರ್ಥಿಗಳು ಲ್ಯಾಪ್‌ಟಾಪ್‌ ಖರೀದಿಸುವಾಗ ಯಾವೆಲ್ಲ ಫೀಚರ್‌ಗಳನ್ನು ಲ್ಯಾಪ್‌ಟಾಪ್‌ ಹೊಂದಿರಬೇಕು ಎಂಬುದು ಅವರಿಗೆ ತಿಳಿದಿರುವುದಿಲ್ಲ. ಇನ್ನು ಅವರಿಗೆ ಕೊಡಿಸುವ ಪೋಷಕರಿಗೂ ಸಾಮಾನ್ಯವಾಗಿ ಲ್ಯಾಪ್‌ಟಾಪ್‌ ಮುಖ್ಯವಾಗಿ ಏನು ಸಾಮರ್ಥ್ಯಗಳನ್ನು ಹೊಂದಿದ್ದರೆ, ಯಾವ ಫೀಚರ್‌ ಹೊಂದಿದ್ದರೆ ತಮ್ಮ ಮಕ್ಕಳಿಗೆ ಹೆಚ್ಚು ಉಪಯುಕ್ತ ಎಂಬುದನ್ನು ಅವರು ತಿಳಿದಿರುವುದಿಲ್ಲ. ಆದ್ದರಿಂದ ಇಂದಿನ ಲೇಖನದಲ್ಲಿ ಉತ್ತಮ ಲ್ಯಾಪ್‌ಟಾಪ್‌ ಆಯ್ಕೆ ಮಾಡುವುದು ಹೇಗೆ? ಎಂಬುದನ್ನು ಕೆಲವು ಪ್ರಮುಖ ಫೀಚರ್‌ಗಳ ಮೂಲಕ ಈ ಕೆಳಗಿನಂತೆ ತಿಳಿಯಬಹುದು.


ಲ್ಯಾಪ್‌ಟಾಪ್‌ ಸ್ಕ್ರೀನ್‌ ಅಳತೆ ಮತ್ತು ತೂಕ
ಲ್ಯಾಪ್‌ಟಾಪ್‌ ಕಂಪ್ಯೂಟರ್ ಸ್ಕ್ರೀನ್ ಸಾಮಾನ್ಯವಾಗಿ 9-17 ಇಂಚು (23-43 ಸೆಂ.ಮೀ) ಡಿಸ್‌ಪ್ಲೇ ಹೊಂದಿರುತ್ತವೆ. ಡಿಸ್‌ಪ್ಲೇ ಅಳತೆ ಹೆಚ್ಚಿದಂತೆಲ್ಲಾ ತೂಕವು ಹೆಚ್ಚುತ್ತದೆ. ಆದ್ದರಿಂದ ನಿಮ್ಮಲ್ಲಿರುವ ಹಣ ಮತ್ತು ಫೀಚರ್‌ಗಳನ್ನು ಪರಿಗಣಿಸಿ ಲ್ಯಾಪ್‌ಟಾಪ್‌ ಆಯ್ಕೆ ಮಾಡಬೇಕಾಗುತ್ತದೆ. ಹೆಚ್ಚಿನ ಅಳತೆಯ ಸ್ಕ್ರೀನ್‌ ಲ್ಯಾಪ್‌ಟಾಪ್‌ಗಳನ್ನು ಸಾಮಾನ್ಯವಾಗಿ ಪ್ರಯಾಣ ಮಾಡುವಾಗ ಕೊಂಡ್ಯೊಯಲು ಕಷ್ಟ.ಅಲ್ಲದೇ ಬ್ಯಾಟರಿ ಲೈಫ್‌ ಸಹ ದೀರ್ಘಕಾಲ ಬರುವುದಿಲ್ಲ. ಆದರೆ ಉಪಯೋಗವೆಂದರೆ ಉತ್ತಮ ಗ್ರಾಫಿಕ್ ಡಿಸೈನ್‌ಗೆ ಸಪೋರ್ಟ್‌ ನೀಡುತ್ತದೆ. ಚಿಕ್ಕ ಸ್ಕ್ರೀನ್ ಪಿಸಿಗಳು ಇದಕ್ಕೆ ವಿರುದ್ಧವಷ್ಟೆ.

ಸಿಪಿಯು (ಸೆಂಟ್ರಲ್ ಪ್ರೊಸೆಸಿಂಗ್ ಯುನಿಟ್)

ನಿಮ್ಮ ಕಂಪ್ಯೂಟರ್ ಬ್ರೈನ್‌ ಎಂದರೆ ಸಿಪಿಯು. ಇಂಟೆಲ್‌ ಮತ್ತು ಎಎಂಡಿ ಕಂಪನಿಗಳು ಸಿಪಿಯು ಸೇವೆ ನೀಡುವ ಪ್ರಮುಖ ಕಂಪನಿಗಳು. ಇಂಟೆಲ್‌ ಸುಧಾರಿತ ತಂತ್ರಜ್ಞಾನದಲ್ಲಿ ಮಾರುಕಟ್ಟೆಯಲ್ಲಿ ಸ್ವಲ್ಪ ಮೂಲೆಗುಂಪಾಗಿದೆ. ಆದರೆ ಎಎಂಡಿ ಕಡಿಮೆ ಬೆಲೆಗೆ ಕಾಂಪಿಟೇಟಿವ್‌ ಮಾಡೆಲ್‌ಗಳನ್ನು ನೀಡುತ್ತದೆ. ಡ್ಯುಯಲ್ ಕೋರ್‌ ಸಿಪಿಯುಗಳು ಗೇಮಿಂಗ್ ಮತ್ತು ಗ್ರಾಫಿಕ್‌ಗಳಿಗೆ ಹೆಚ್ಚು ಪವರ್‌ಫುಲ್‌ ಮಾತ್ರವಲ್ಲದೇ ಬೆಟರ್ ಸಪೋರ್ಟ್‌ ನೀಡುತ್ತದೆ.ಸಿಂಗಲ್ ಕೋರ್ ಸಿಪಿಯು'ಗಳು ಕೇವಲ ಆಫೀಸ್‌ ಬಳಕೆಗೆ ಮತ್ತು ವೆಬ್‌ ಬ್ರೌಸಿಂಗ್‌ಗೆ ಉಪಯುಕ್ತವಾಗಿದ್ದು, ವೆಚ್ಚ ಹೆಚ್ಚಾಗುತ್ತದೆ ಅಷ್ಟೆ.

RAM
ಬ್ಯುಸಿನೆಸ್ ಟ್ರಾವೆಲರ್‌ಗಳು ಮತ್ತು ಗೃಹ ಬಳಕೆದಾರರು 2GB-4GB ವರೆಗಿನ RAM ಬಳಕೆ ಮಾಡಿದರೆ ಸಾಕಾಗುತ್ತದೆ. ಆದರೆ ಗೇಮ್‌ ಆಡಲು, ಗ್ರಾಫಿಕ್ ಆರ್ಟಿಸ್ಟ್‌ ಮತ್ತು ಉತ್ತಮ ಗುಣಮಟ್ಟದ ವಿಡಿಯೋಗಳ ವರ್ಕ್‌ ಮಾಡುವವರು ಕನಿಷ್ಠ 4GB-8GB ವರೆಗಿನ RAM ಸಾಮರ್ಥ್ಯವನ್ನು ಬಳಕೆ ಮಾಡಲೇಬೇಕಾಗುತ್ತದೆ. ವಿದ್ಯಾರ್ಥಿಗಳು ಕೇವಲ ಹೋಮ್‌ವರ್ಕ್‌, ಇ-ಮೇಲ್‌ ಮತ್ತು ವೆಬ್‌ ಬ್ರೌಸಿಂಗ್‌ಗೆ ಲ್ಯಾಪ್‌ಟಾಪ್‌ ಬಳಕೆ ಮಾಡುವುದರಿಂದ 1GB RAM ಬಳಕೆ ಸಾಕಾಗುತ್ತದೆ.

ಅಂದಹಾಗೆ ಲ್ಯಾಪ್‌ಟಾಪ್‌ ಖರೀದಿಸುವಾಗ ಈ ಮೇಲಿನ ಮೂರು ಪ್ರಮುಖ ಫೀಚರ್‌ಗಳ ಮೇಲೆ ಎಲ್ಲರೂ ಹೆಚ್ಚು ಗಮನಹರಿಸಬೇಕಿದ್ದು, ತಾವು ಯಾವ ಉದ್ದೇಶಕ್ಕಾಗಿ ಲ್ಯಾಪ್‌ಟಾಪ್‌ ಖರೀದಿಸುತ್ತೀರಿ ಎಂಬುದರ ಮೇಲೆ ಫೀಚರ್‌ಗಳನ್ನು ಗುರಿಯಾಗಿಸಿ ಲ್ಯಾಪ್‌ಟಾಪ್‌ ಖರೀದಿಸಬಹುದು.

ಆನ್‌ಲೈನ್‌ ಲ್ಯಾಪ್‌ಟಾಪ್‌ ಫೈಂಡರ್‌ ಬಳಸಿ
ಇಂದು ಹಲವು ಆನ್‌ಲೈನ್‌ ಶಾಪಿಂಗ್‌ ವೆಬ್‌ಸೈಟ್‌ಗಳಲ್ಲಿ ನೀವು ಯಾವುದೇ ಪ್ರಾಡಕ್ಟ್‌ ಕೊಳ್ಳುವಾಗ ಅವುಗಳ ಫೀಚರ್‌ಗಳು, ಟೂಲ್‌ಗಳನ್ನು ಆಯ್ಕೆ ಮಾಡಿ ಉತ್ತಮ ಲ್ಯಾಪ್‌ಟಾಪ್ ಚೆಕ್‌ ಮಾಡಿಕೊಳ್ಳಬಹುದು. ಶೀಘ್ರವಾಗಿ ಬೆಸ್ಟ್‌ ಲ್ಯಾಪ್‌ಟಾಪ್‌ಗಳನ್ನು ಶಾಪಿಂಗ್ ಸೈಟ್‌ಗಳಲ್ಲಿ ಸರ್ಚ್‌ ಮಾಡಿಕೊಳ್ಳಬಹುದಾಗಿದೆ.







No comments:

Post a Comment