ಶನಿವಾರ ರಾತ್ರಿ ಸೌದಿ ಅರೆಬಿಯಾದ ಜಡ್ಡಾದಲ್ಲಿ ನೆಡೆದ WWE ಯ ಪ್ರಸಿದ್ದ ಪ್ರೈಮ್ ಇವೆಂಟ್ Night of Champions ಶೋ ಅಚ್ಚರಿಯ ಫಲಿತಾಂಶದೊಂದಿಗೆ ಮಕ್ತಾಯವಾಗಿದೆ ...
1) ಶೋನ ಮೊದಲ ಮ್ಯಾಚಿನಲ್ಲಿ ಹೊಸದಾಗಿ ಪರಿಚಯಿಸಿದ್ದ World Heavyweight Championship ಗಾಗಿ ಸೆಥ್ ರಾಲೆನ್ಸ್ ಮತ್ತು ಎ ಜೆ ಸ್ಟೈಲ್ ನಡುವೆ ನೆಡೆದ ಪಂದ್ಯದಲ್ಲಿ ,ಪಂದ್ಯದ 20.40 ನಿಮಿಷದಲ್ಲಿ ಎ ಜೆ ಸ್ಟೈಲ್ ರವರನ್ನು ಪಿನ್ ಫಾಲ್ ಮೂಲಕ ಸೋಲಿಸಿದ ಸೆಥ್ ರಾಲೆನ್ಸ್ ಹೊಸದಾಗಿ ಪರಿಚಯವಾಗಿದ್ದ World Heavyweight Championship ಗೆದ್ದು ಹೊಸ ಚಾಂಪಿಯನ್ ಆದರು , ಪಂದ್ಯ ಮುಗಿದ ಬಳಿಕ WWE ನ ಕ್ರಿಯೇಟಿವ್ ಹೆಡ್ ಟ್ರಿಪಲ್ ಎಚ್ ರವರು ಹೊಸ ಚಾಂಪಿಯನ್ಷಿಪ್ ಅನ್ನು ಸೆಥ್ ರಾಲೆನ್ಸ್ ಗೆ ನೀಡುವ ಮೂಲಕ ಗೌರವ ಸೂಚಿಸಿದರು
2)ನಂತರ ನೆಡೆದ ಎರಡನೇ ಪಂದ್ಯದಲ್ಲಿ WWE ಯ ಹಾಲ್ ಆಫ್ ಫೇಮರ್ ಆದಂತಹ ಟ್ರಿಸ್ ಸ್ಟ್ರಾಟಸ್ ರವರು ಜೋಯಿ ಸ್ಟಾರ್ಕ್ ಸಹಾಯದಿಂದ ಬೆಕ್ಕಿ ಲಿಂಚ್ ರವರನ್ನು ಪಂದ್ಯದ 14.50 ನಿಮಿಷದಲ್ಲಿ ಪಿನ್ ಫಾಲ್ ಮಾಡಿ ಸೋಲಿಸಿದರು ...
3) ಶೋ ನಲ್ಲಿ ನೆಡೆದ ಮೂರನೆ ಪಂದ್ಯದಲ್ಲಿ ನಿರೀಕ್ಷೆಯಂತೆ ಮುಸ್ತಫಾ ಅಲಿಯವರನ್ನು ಪಿನ್ ಫಾಲ್ ಮಾಡುವ ಮೂಲಕ ಗಂಟರ್ ರವರು ತಮ್ಮ Intercontinental Championship ಅನ್ನು ತಮ್ಮ ಬಳಿಯೇ ಉಳಿಸಿಕೊಂಡರು ..
4) ಇನ್ನು ಶೋ ನಲ್ಲಿ ನೆಡೆದ ನಾಲ್ಕನೇ ಪಂದ್ಯದಲ್ಲಿ ಅಚ್ಚರಿಯೆಂಬಂತೆ ರಾ ವುಮೆನ್ಸ್ ಚಾಂಪಿಯನ್ ಆಗಿದ್ದಂತಹ ಬಿಯಾಂಕ ಬ್ಲೇರ್ ರವರನ್ನು ಆಸುಕ ರವರು ಪಿನ್ ಫಾಲ್ ಮೂಲಕ ಸೋಲಿಸಿ ಹೊಸ Raw Women's Champion ಆದರು ..
5) ಶೋ ನ ಐದನೇ ಪಂದ್ಯದಲ್ಲಿ ರಿಯಾ ರಿಪ್ಲಿಯವರು ಕೇವಲ 1.10 ನಿಮಿಷದ ಅವಧಿಯಲ್ಲೇ ನಟಾಲಿಯ ರವರನ್ನು ಪಿನ್ ಫಾಲ್ ಮಾಡುವ ಮೂಲಕ ತಮ್ಮ SmackDown Women's Championship ಅನ್ನು ತಮ್ಮ ಬಳಿಯೇ ಉಳಿಸಿಕೊಂಡರು ..
6) ಶೋ ನ ಆರನೇ ಪಂದ್ಯದಲ್ಲಿ ದಿ ಬೀಸ್ಟ್ ಖ್ಯಾತಿಯ ಬ್ರಾಕ್ ಲೆಸ್ನರ್ ರವರು ಕೋಡಿ ರೋಡ್ಸ್ ರವರನ್ನು ಪಂದ್ಯದ 9:40 ನಿಮಿಷದ ಅವಧಿಯಲ್ಲಿ ಟೆಕ್ನಿಕಲ್ ಸಬ್ಮಿಷನ್ ಮೂಲಕ ಸೋಲಿಸಿದರು... ಕೋಡಿ ರೋಡ್ಸ್ ಪಂದ್ಯಕ್ಕಿಂತ ಮೊದಲೇ ಕೈಗೆ ದೊಡ್ಡ ಪೆಟ್ಟು ಬಿದ್ದಿದ್ದ ಕಾರಣ ಎಷ್ಟೇ ಪ್ರಯತ್ನಪಟ್ಟರು ಬ್ರಾಕ್ ಲೆಸ್ನರ್ ರವರನ್ನು ಸೋಲಿಸಲಾಗಲಿಲ್ಲ...
7) ಇನ್ನು ಶೋ ನ ಕೊನೆಯ ಪಂದ್ಯದಲ್ಲಿ Undisputed Universal Champion ಆಗಿ 1000 ದಿನ ಮುಗಿಸಿ ದಾಖಲೆ ಮಾಡಿದ್ದಂತಹ ರೋಮನ್ ರೈನ್ಸ್ ಗೆ ದೊಡ್ಡ ಸೋಲು ಎದುರಾಯಿತು
ಸೊಲೊ ಸಿಕಾವೋ ಜೊತೆಗೂಡಿ Undisputed WWE Tag Team Championship ಗಾಗಿ ಸ್ಯಾಮಿ ಜೈನ್ ಮತ್ತು ಕೆವಿನ್ ಓವೆನ್ಸ್ ವಿರುದ್ದ ಆಡುತ್ತಿದ್ದ ಪಂದ್ಯದಲ್ಲಿ ಯುಸೋ ಗಳು ಅಚ್ಚರಿ ಎಂಬಂತೆ ರೋಮನ್ ರೈನ್ಸ್ ವಿರುದ್ದವೇ ತಿರುಗಿಬಿದ್ದ ಕಾರಣ ಸೋಲೊ ಸಿಕಾವೋ ರವರನ್ನು ಪಿನ್ ಫಾಲ್ ಮಾಡುವ ಮೂಲಕ ಸ್ಯಾಮಿ ಜೈನ್ ಮತ್ತು ಕೆವಿನ್ ಓವೆನ್ಸ್ ರವರು ತಮ್ಮ ಚಾಂಪಿಯನ್ಷಿಪ್ ಗಳನ್ನು ತಮ್ಮ ಬಳಿಯೇ ಉಳಿಸಿಕೊಂಡರು...
ಹೆಚ್ಚಿನ ನ್ಯೂಸ್ ಗಳಿಗಾಗಿ
https://chat.whatsapp.com/L3sFUjEjg8bBca9R8SP48E
No comments:
Post a Comment